ಬಸವಣ್ಣನವರ ಬಗ್ಗೆ ಸಂಕ್ಷಿಪ್ತ ಮಾಹಿತಿ ಮಾಹಿತಿ:
ಬ್ರಾಹ್ಮಣ ಜನಿಸಿ, ಜನಿವಾರ, ಮತವನ್ನು ತ್ಯಜಿಸಿ ಮಲಪ್ರಭ-ಕೃಷ್ಣವೇಣಿ ಸಂಗಮ ಸ್ಥಾನ ಕಪ್ಪಡಿಗೆ ಬಂದರು.
ಈಶಾನ್ಯ ಗುರುಗಳಿಂದ ದೀಕ್ಷೆ ಪಡೆದು,ಮುಂದೆ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದರು.
ಬಸವಣ್ಣ ಮತ್ತು ಅವರ ವಚನಗಳು:
ವಚನದ ವೈಶಿಷ್ಟತೆ:
- ಕೂಡಲ ಸಂಗಮ ದೇವ ಇವರ ಅಂಕಿತ ನಾಮ
- ಚಿಕ್ಕ ಚಿಕ್ಕ ಪದಗಳ ಮೂಲಕ ಬದುಕಿನ ಹಿರಿದಾದ ಅರ್ಥಕೊಡುವಂತಹವು ವಚನಗಳು
- ಅಲಂಕಾರ ಧ್ವನಿಗಳ, ಸಂಕೇತಗಳ ಹೇರಳ ಬಳಕೆ ಇಲ್ಲಿರುತ್ತದೆ
- ನೇರವಾಗಿ ಸಮಾಜ ವಿಮರ್ಶೆ
- ಕಾಯಕವೇ ಕೈಲಾಸ ಎನ್ನುವುದು ಬಸವಣ್ಣ ನ ಮೂಲ ತತ್ವ
ಬಸವಣ್ಣನವರ ವಚನಗಳು:
ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಯ್ಯ ಬಡವನಯ್ಯ
ಕಾಗೆಯೊಂದು ಅಂಗಳಕಂಡರೆ ಕೂಗಿ ಕರೆಯದೆ ಬಳಗವೆಲ್ಲವ, ಕೋಳಿಯೊಂದು ಗುಟುಕು ಕಂಡರೆ
ನನ್ನ ನರವ ತಂತಿ ಮಾಡಯ್ಯ, ಎನ್ನ ಸಿರವ ಸೋರೆಯ ಬುಂಡೆ ಮಾಡಯ್ಯ
ಕಲ್ಲ ನಾಗರ ಕಂಡರೆ ಹಾಲೆರೆವರಯ್ಯ ದಿಟನಾಗರ ಬಂದರೆ ಕೊಲ್ಲೆಂಬರಯ್ಯ
ಕೊಲ್ಲುವನೇ ಮಾದಿಗ, ಹೊಲಸು ತಿಂಬುವನೇ ಹೊಲೆಯ
ಹಾವಿನ ಬಾಯಿಯ ಕಪ್ಪೆ ಹಸಿದು ಹಾರುವ ನೊಣಕ್ಕೆ ಪಡುವಂತೆ
ಲೋಕದ ಡೊಂಕ ನೀವೇಕೆ ತಿದ್ದುವಿರಿ ?ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ-ನಿಮ್ಮ ಮನವ ಸಂತೈಸಿಕೊಳ್ಳಿ
ಕಳಬೇಡ ಕೊಲಬೇಡ,ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ,ಇದಿರ ಹಳಿಯಲು ಬೇಡ
ದಯವೇ ಧರ್ಮದ ಮೂಲವಯ್ಯ ದಯೆಯೇ ಬೇಕು ಸಕಲ ಜೀವಾತ್ಮರಿಗೆ
ನುಡಿದರೆ ಮುತ್ತಿನ ಹಾರದಂತಿರಬೇಕು,ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು
No comments:
Post a Comment