Wednesday 14 July 2021

ರಾಷ್ಟ್ರ ಕವಿ ಕುವೆಂಪು ರವರ ಬಗ್ಗೆ ಕೆಲವು ಅಂಶಗಳು | Kuvempu information in Kannada | Kuvempu famous poems proverbs


ರಾಷ್ಟ್ರ ಕವಿ ಕುವೆಂಪು ರವರ ಬಗ್ಗೆ ಕೆಲವು ಅಂಶಗಳು :

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ರವರ ನಾಮ - ಕುವೆಂಪು. 


ನಮ್ಮ ರಾಷ್ಟ್ರ ಕವಿ ಕುವೆಂಪು - ಕನ್ನಡ ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗಮನಿಸಿ ಕುವೆಂಪು ರವರನ್ನು ರಾಷ್ಟ್ರ ಕವಿ ಎಂದು ಕರ್ನಾಟಕ ಸರ್ಕಾರ ೧೯೬೪ ರಲ್ಲಿ ಪುರಸ್ಕರಿಸಿತು. 


ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡದ ಸಾಹಿತಿ ಇವರಾಗಿದ್ದಾರೆ. 

ಕರ್ನಾಟಕ ರಾಜ್ಯ ಗೀತೆ - "ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ"  ಇವರ ರಚನೆಯಾಗಿದೆ 

ಇವರ ಮಹಾ ಅವ್ಯ- ಶ್ರೀ ರಾಮಾಯಣ ದರ್ಶನಂ ,ಚಿತ್ರಾಂಗದಾ 

ಇವರ ಖ್ಯಾತ ಕಾದಂಬರಿಗಳು - ಮಲೆಗಳಲ್ಲಿ ಮದುಮಗಳು , ಕಾನೂರು ಹೆಗ್ಗಡತಿ (ಕಾನೂರು ಹೆಗ್ಗಡತಿ ಯನ್ನು ಚಲನ ಚಿತ್ರವಾಗಿ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ್ದಾರೆ)


ಕುವೆಂಪುರವರ ಖ್ಯಾತ ನುಡಿಗಳು: 

"ಓ ನನ್ನ ಚೇತನಾ.. ಆಗು ನೀ ಅನಿಕೇತನ  

ರೂಪ ರೂಪಗಳನು ದಾಟಿ 

ನಮ ಕೋಟಿಗಳನು ಮೀಟಿ 

ಎದೆಯ ಬಿರಿಯೆ ಭವಾದೀಟಿ 

ಓ ನನ್ನ ಚೇತನ..  ಆಗು ನೀ ಅನಿಕೇತನ "


 

"ಎಲ್ಲಾದರೂ ಇರು ಎಂತಾದರು ಇರು, 

ಎಂದೆಂದಿಗೂ ನೀ ಕನ್ನಡವಾಗಿರು "


"ಬಾ ಇಲ್ಲಿ ಸಂಭವಿಸು 

ಇಂದೆನ್ನ ಹೃದಯ ದಲಿ 

ನಿತ್ಯವೂ ಅವತರಿಪ 

ಸತ್ಯವತಾರ "


No comments:

Post a Comment